Thursday, December 22, 2011

ಒಮ್ಮೆ ಬಾರೋ.....ಒಮ್ಮೆ ಬಾರೋ ("ಸಂಜು ಮತ್ತು ಗೀತ" ಚಿತ್ರದ ಗೀತೆ)

ಒಮ್ಮೆ  ಬಾರೋ, ಒಮ್ಮೆ  ಬಾರೋ ,
ಎಲ್ಲೇ  ನೀನಿದ್ದರೂ...
ಒಮ್ಮೆ  ಬಾರೋ, ಒಮ್ಮೆ  ಬಾರೋ,
ಬೇಗ  ಹೇಗಿದ್ದರು .

ಸುರಿಮಳೆ  ಸುರಿಯುವ  ಸೂಚನೆ,
ಶುರಿವಾಗಿದೆ ...ಶುರುವಾಗಿದೆ .
ಜೊತೆಯಲಿ  ನೆನೆಯಲು  ನಲ್ಲನೆ ,
ಮನಸಾಗಿದೆ , ಮಿಡುಕಾಡಿದೆ, ಹುಡುಕಾಡಿದೆ ...

ಒಮ್ಮೆ  ಬಾರೋ, ಒಮ್ಮೆ  ಬಾರೋ,
ಎಲ್ಲೇ  ನೀನಿದ್ದರೂ ...
ಒಮ್ಮೆ  ಬಾರೋ, ಒಮ್ಮೆ  ಬಾರೋ.
ಬೇಗ  ಹೇಗಿದ್ದರು .

ಬಲಗಣ್ಣು  ಬಡಿದಾಗ ,
ಬರಲಿಲ್ಲ ...ಯಾಕೆ  ನೀನು ?
ಎಡಗಾಲು  ಎಡವಿದರೂ ...
ಸುಳಿವಿಲ್ಲ, ಎಲ್ಲಿ  ನೀನು ?
ಕೈ  ತುತ್ತು  ಜಾರಿದಾ..ಕ್ಷಣ ,
ರಂಗೋಲಿಯ  ಬರೆದೆನು .

ಸುರಿಮಳೆ  ಸುರಿಯುವ  ಸೂಚನೆ,
ಶುರಿವಾಗಿದೆ ...ಶುರುವಾಗಿದೆ .
ಜೊತೆಯಲಿ  ನೆನೆಯಲು  ನಲ್ಲನೆ ,
ಮನಸಾಗಿದೆ , ಮಿಡುಕಾಡಿದೆ, ಹುಡುಕಾಡಿದೆ ...

ಒಮ್ಮೆ  ಬಾರೋ, ಒಮ್ಮೆ  ಬಾರೋ,
ಎಲ್ಲೇ  ನೀನಿದ್ದರೂ ...
ಒಮ್ಮೆ  ಬಾರೋ, ಒಮ್ಮೆ  ಬಾರೋ.
ಬೇಗ  ಹೇಗಿದ್ದರು .

ಅದೇ  ಹಾದಿ  ತುಳಿವಾಗ ,
ಎದೆ  ತುಂಬಾ ... ನೂರು  ನೋವು .
ಇಳಿ ಸಂಜೆ  ಕಳೆವಾಗ,
ಸುಳಿದಂತೆ ...ಇಲ್ಲಿ  ಸಾವು .
ಅಸು  ನೀಗೋ  ಮುನ್ನ  ನಿನ್ನನು ,
ತುಸು  ನೋಡಲು ,ಕಾದಿಹೆನು .

ಒಮ್ಮೆ  ಬಾರೋ ...ಒಮ್ಮೆ  ಬಾರೋ ...
ಎಲ್ಲೇ  ನೀನಿದ್ದರು ...
ಒಮ್ಮೆ  ಬಾರೋ ...ಒಮ್ಮೆ  ಬಾರ್ o...
ಬೇಗ  ಹೇಗಿದ್ದರೂ ...

ಸುರಿಮಳೆ  ಸುರಿಯುವ  ಸೂಚನೆ ...
ಶುರಿವಾಗಿದೆ ...ಶುರುವಾಗಿದೆ ...
ಜೊತೆಯಲಿ  ನೆನೆಯಲು  ನಲ್ಲನೆ ...
ಮನಸಾಗಿದೆ ...ಮಿಡುಕಾಡಿದೆ...ಹುಡುಕಾಡಿದೆ ...

Monday, October 24, 2011

ಮರೆಯಲೆಂದರೂ ಹೇಗೆ ಮರೆಯಲಿ?


ಮರೆಯಲೆಂದರೂ ಹೇಗೆ ಮರೆಯಲಿ?
ಮರೆಯಲೆಂದರೂ ಹೇಗೆ ಮರೆಯಲಿ,
ಎನ್ನ ಪ್ರೀತಿ ಸುಳ್ಳಲ್ಲ ಕೇಳೆನ್ನ ಗೆಳೆಯ,
ಮರೆಯಲೆಂದರೂ ಹೇಗೆ ಮರೆಯಲಿ?
ನಿಸ್ವಾರ್ಥ ಭಾವವಿದು ಅರಿಯಬಾರದೆ? ನನ್ನೀ ಮೊರೆಯ,
ಮರೆಯಲೆಂದರೂ ಹೇಗೆ ಮರೆಯಲಿ?

"ನೀ ಎನ್ನ ಮನದನ್ನೆ " ಎಂದಿದ್ದೆ ನನಗಂದು,
ಅದೇ ಸಾಲು ಇನ್ನಾರಿಗೋ ಅಲಂಕರಿಸಿದೆ ನೀನಿಂದು,
ಮೋಸಹೋದ ಏನ ಪ್ರೀತಿ ಅತ್ತು ಕರೆದಿತ್ತು ಆ ದಿನದಂದು,
ಬೇಸರ ಕೋಪದಿ ತಿರುಗಿತ್ತು ಮೋಡಗಳಾ ಬಣ್ಣ ಕಂದು,
ಛೆ, ಮರೆಯಬೇಕಿವನನ್ನ,
ಎಂದರೂ ಹೇಗೆ ಮರೆಯಲಿ? ನಿಸ್ವಾರ್ಥ ಭಾವವಿದು ಕೇಳೆನ್ನ ಇನಿಯ.
ಮರೆಯಲೆಂದರೂ ಹೇಗೆ ಮರೆಯಲಿ.

ಮರೆಯಲೆಂದರೂ ಹೇಗೆ ಮರೆಯಲಿ?
ಮರೆಯಲಾರೆನು, ಮರೆತು ಎನ್ನ  ಬದುಕಿರದು,
ನೀನಿರದಿದ್ದರೇನಂತೆ  ನಿನ ನೆನಪಿಹುದು,
ಆ ನೆನಪಲೆ ಬಾಳುವ ಛಲವಿಹುದು, 
"ಎಲ್ಲೋ ಸುಖವಾಗಿರು" ಎಂಬ ಹರಕೆಇಹುದು,
ಮರೆಯಲಾರೆನು. ಏಕೆಂದರೆ,
ನಿಸ್ವಾರ್ಥ ಭಾವವಿದು, ಇದೇ ನನ್ನ ನಿರ್ಣಯ. 

Thursday, August 18, 2011

ನಿನ್ನ ಮುಖ ನೋಡಿ........

ನಿನ್ನ ಮುಖ ನೋಡಿ , ಸುಪ್ರಭಾತ ಹಾಡಿ,
ಮುಂಜಾನೆಯನ್ನು, ಸ್ವಾಗತಿಸೋ ಆಸೆ. 


ನಿನ್ನ ಜೊತೆ ಕೂಡಿ, ಕಡಲ ದಡದಿ ಆಡಿ,
ಮುಸ್ಸಂಜೆಯನ್ನು, ಬೀಳ್ಕೊಡುವ ಆಸೆ.


ಹೂವಂಥ ನಿನ ಮಡಿಲಲಿ , ತಲೆ ಇಟ್ಟು ನಾ ಇರುಳಲಿ,
ಮಲಗಿ ಆಕಾಶ ನೋಡಿ ತಾರೆ ಎಣಿಸುವ ಆಸೆಯೂ.......


ನನ ಸನಿಹದ ಇಡಿ ಬಳಗವ ನೀ ದೂರ ತಳ್ಳಿದೆ,
ಬಹು ದೂರದ ನಾನಾ ಕನಸನು ನೀ ಸನಿಹ ಮಾಡಿದೆ.


ಹನಿಯಾಗಿ ಎದೆ ಸೇರಿದ, ಒಲವೀಗ ಕಡಲಾಗಿದೆ,
ನಿನಗೆ ಹೇಳೋಣ ಎಂದರೆ ಮುಜುಗರ ಕಾಡಿದೆ...........


ಓ ಕಾಲವೇ ನೀ ಓಡದೆ , ಅಲ್ಲೇ ನಿಲ್ಲು ಒಂದೆಡೆ,
ಈ ರಸ ಕ್ಷಣ, ಇಡಿ ಜೀವನ ಹೀಗೆ ಇರಬೇಕಿದೆ,
ನನಗೀಗ ನನ್ನ ಪರಿಚಯ ನಿನ್ನಿಂದ ಖಾತರಿ ಆಗಿದೆ.........
 


 

 

Friday, July 15, 2011

ಪ್ರತಿ ಮನೆಯ ಬೆಳಕಲ್ಲು ನಿನ್ನದೇ ಪ್ರತಿಬಿಂಬ



ನಮಿಸುವೆನು ಗುರು ನಿನಗೆ  ಭಕ್ತಿ ಭಾವದಿಂದ,
ಬೆಳಗುವುದು ಜಗವೆಲ್ಲ ನಿನ್ನ ಕರುಣೆಯಿಂದ.

ಪ್ರತಿ ಮನೆಯ ಬೆಳಕಲ್ಲು ನಿನ್ನದೇ ಪ್ರತಿಬಿಂಬ,
ಪ್ರತಿ ಮಗುವ ಬದುಕಲ್ಲೂ ನೀನೇ ಆಧಾರ ಕಂಬ.

ನಿನ್ನಿಂದಲೇ ತಾನೆ ಈ ಬಂಧು ಬಳಗ,
ನಿನ್ನಿಂದಲೇ ನಾವು ಈ ದೇಶದ ಸಲಗ.

ಪ್ರತಿ ಮನುಜನ ಮನದಲ್ಲಿ ನಿನಗೆ ಮಂದಿರವಿಹುದು
ಪ್ರತಿ ದಿನಕು ಪ್ರತಿ ಕ್ಷಣಕು ನಿನ್ನ ಹೆಸರಿಹುದು.

ಹೇಳೋ ಹೇಳೋ ಮಳೆರಾಯ

ನಿನಗೂ ಕೋಪವೇ ಬಡವರ ಮೇಲೆ,
ಪಟ-ಪಟ ಸುರಿಯುವೆ ಮಳೆರಾಯ.
ಧಾನ್ಯವ ಕೊಚ್ಚಿ, ಮನುಜರ ಚಚ್ಚಿ,
ಎಲ್ಲಿಗೆ ಹೋಗುವೆ ಜವರಾಯ?

ಕೋಗಿಲೆ ಕಂಠ ಮಧುರವು ನಿನಗೆ,
ರೈತನ ಕೂಗು ಕೇಳಿಸದೆ?
ರಂಭೆ ಊರ್ವಶಿ ಕಾದಿಹರಲ್ಲಿ,
ಬೇಗನೆ ಹೋಗೋ ಮಾರಾಯ.

ಎಲ್ಲರ ನಡುಗಿಸಿ, ಅಹಂ ಹುದುಗಿಸಿ,
ಧರೆಯನು ಸೇರಲು ಬಂದಿಹೆಯ?
ಸಾಗರ ಕಾಣುವ ತವಕದಿ ನೀನು,
ಪ್ರೀತಿಯ ಕಡಲನು ತಂದಿಹೆಯ?

ಹಿಂದೂ ಮುಸ್ಲಿಂ ಕ್ರೈಸ್ತರು ಎನ್ನದೆ,
ಎಲ್ಲರ ಮೈಲಿಗೆ ಕಳೆದಿರುವೆ.
ಕನ್ನಡ ತಮೀಳು ತೆಲುಗು ಎನ್ನದೆ,
ಎಲ್ಲರ ಮನೆಯ ತೊಳೆದಿರುವೆ,
     ಹೇಳು ಎಲ್ಲಿಗೆ ನೀನು ಹೊರೆಟಿರುವೆ?

Wednesday, July 13, 2011

ನಿನಗೇ ಬರೆದ ಪತ್ರ....

ನಿನಗೇ ಬರೆದ ಪತ್ರ.
ನಿನಗೇ ಬರೆದ ಪತ್ರ, ತಲುಪಿತೇ ನಿನ್ನ ಮನದಂಗಳವ ಗೆಳತಿ?
ಕಾದಿಹೆನು ಉತ್ತರಕೆ, ತರುವೆಯಾ ಒಪ್ಪಿಗೆಯ ಕಣ್ಣಲ್ಲೇ ಸರತಿ
ಹ್ಞೂ ಅನ್ನು.
 ಹ್ಞೂ ಅನ್ನು, ಈಗಲೇ ಆಗುತಿ ನೀ ಎನ್ನ ಹೆಂಡತಿ
ತುಸು ಘಾಟಿ ಎನ್ನಮ್ಮ , ಒಪ್ಪಿಸು ಬಾ ಆಗ ನೀ ಮನ ರಾಜ್ಯದ ಒಡತಿ.

ನಿನಗೇ ಬರೆದ ಪತ್ರ.
ನಿನಗೇ ಬರೆದ ಪತ್ರ, ನಿನ್ನಣ್ಣನ ಕರ ಹೊಕ್ಕಲಿಲ್ಲ ತಾನೆ?
ಅಡ್ಡಿಯಿಲ್ಲ ಸಿಕ್ಕರೂ , ಇಂತಿ ಹೆಸರಿಲ್ಲ ಬಲು ಜಾಣ ನಾನೇ.
ತೋರದಿರು ನಿನ್ನಕ್ಕನಿಗೆ....
ತೋರದಿರು ನಿನ್ನಕ್ಕನಿಗೆ ಅವಳ ಮೊದಲ ಪತ್ರದ ಒಡೆಯ ನಾನೇ,
ಈಗಲೂ ಇಷ್ಟವೇ .....
ಅದರೇನು ಮಾಡಲಿ, ಆಕೆಗೀಗ ಎರಡು ಮಕ್ಕಳು ತಾನೆ?

ನಿನಗೇ ಬರೆದ ಪತ್ರ.
ನಿನಗೇ ಬರೆದ ಪತ್ರ, ಉತ್ತರ ನನಗೇ ಇರಲಿ, ನಿನ್ಹೆಸರು ಕಮಲ ತಾನೇ....

ಬರಬಾರದೆ ಓ ಇನಿಯನೆ ?



ಈ ಸಂಜೆಯ ತಂಗಾಳಿಯು ಪಿಸುಗುಟ್ಟಿದೆ ನಿನ್ನ ಹೆಸರನೆ,
ಮೈ ಮುಟ್ಟಿದ ಈ ಹನಿಗಳು ಕೆದಕೆತ್ತಿವೆ ಹಳೆ ನೆನಪನೆ.
ಬರಬಾರದೆ ನೀ ಈಗಲೆ ವೈಮನಸನು ತಲೆಗ್ಹಚ್ಚದೆ,
ತಡಮಾಡದೆ ಬಳಿಸಾರುತ ಏನ ಕಂಗಳ ಬಳಿಗಟ್ಟದೇ.

ನೆನಪಾಗದೆ  ಓ ಇನಿಯನೆ ಜೊತೆ ಕಂಡ ಆ ದಿನಗಳು?
ಮುಂಗಾರಿನ ಆ ಮಳೆಯಲಿ ನಾಲ್ಗೆ ಸುಟ್ಟ ಬಿಸಿ ಒಡೆಗಳು?
ಬಿಗಿದ್ಹಿಡಿದ ಕೊಡೆಯಡಿಯಲಿ ಪಿಸುಗುಟ್ಟಿದ ಜೇನ್ನುಡಿಗಳು?
ಹಸಿಯಾಗಿದೆ ನಾವೊಟ್ಟಿಗೆ ನಡೆದ್ಹೋದ ಈ ಗಲ್ಲಿಗಳು ?

ಹುಡುಕುತ್ತಿವೆ ಏನ ಕಂಗಳು ಎವೆಯಿಕ್ಕದೆ ನಿನ್ನ ದಾರಿಯೇ,
ಚಡಪಡಿಸುತ ಮನ ನೋಡಿದೆ ನಡೆದಾಡುವ ಮಂದಿ ಮೊರೆಯೇ ....
ನಿನ್ನೊಲುಮೆಯ ಕಿರುತಪ್ಪಿಗೆ ಕ್ಷಮೆ ಇಲ್ಲವೆ ಓ ಇನಿಯನೆ ?
ಇನ್ನೆಸೆಗೆನು ಮನ್ನಿಸೆನ್ನನು ಬಾ ಒಮ್ಮೆ ಮನದೊಡೆಯನೆ