ಮನದಲ್ಲೆದ್ದ ಹುಚ್ಚು ಭಾವನೆಗಳು ಚಿಮ್ಮಲೆತ್ನಿಸುತ್ತಿದೆಯಷ್ಟೇ. ತಿಳಿದವರ ಸಲಹೆಗೆ ಶಿರ ಬಾಗುವೆ, ಅದ ಅನುಸರಿಸುವೆ ಇದ್ದರು ಕೆಲಸ ಎಷ್ಟೇ......
Wednesday, July 13, 2011
ಬರಬಾರದೆ ಓ ಇನಿಯನೆ ?
ಈ ಸಂಜೆಯ ತಂಗಾಳಿಯು ಪಿಸುಗುಟ್ಟಿದೆ ನಿನ್ನ ಹೆಸರನೆ,
ಮೈ ಮುಟ್ಟಿದ ಈ ಹನಿಗಳು ಕೆದಕೆತ್ತಿವೆ ಹಳೆ ನೆನಪನೆ.
ಬರಬಾರದೆ ನೀ ಈಗಲೆ ವೈಮನಸನು ತಲೆಗ್ಹಚ್ಚದೆ,
ತಡಮಾಡದೆ ಬಳಿಸಾರುತ ಏನ ಕಂಗಳ ಬಳಿಗಟ್ಟದೇ.
ನೆನಪಾಗದೆ ಓ ಇನಿಯನೆ ಜೊತೆ ಕಂಡ ಆ ದಿನಗಳು?
ಮುಂಗಾರಿನ ಆ ಮಳೆಯಲಿ ನಾಲ್ಗೆ ಸುಟ್ಟ ಬಿಸಿ ಒಡೆಗಳು?
ಬಿಗಿದ್ಹಿಡಿದ ಕೊಡೆಯಡಿಯಲಿ ಪಿಸುಗುಟ್ಟಿದ ಜೇನ್ನುಡಿಗಳು?
ಹಸಿಯಾಗಿದೆ ನಾವೊಟ್ಟಿಗೆ ನಡೆದ್ಹೋದ ಈ ಗಲ್ಲಿಗಳು ?
ಹುಡುಕುತ್ತಿವೆ ಏನ ಕಂಗಳು ಎವೆಯಿಕ್ಕದೆ ನಿನ್ನ ದಾರಿಯೇ,
ಚಡಪಡಿಸುತ ಮನ ನೋಡಿದೆ ನಡೆದಾಡುವ ಮಂದಿ ಮೊರೆಯೇ ....
ನಿನ್ನೊಲುಮೆಯ ಕಿರುತಪ್ಪಿಗೆ ಕ್ಷಮೆ ಇಲ್ಲವೆ ಓ ಇನಿಯನೆ ?
ಇನ್ನೆಸೆಗೆನು ಮನ್ನಿಸೆನ್ನನು ಬಾ ಒಮ್ಮೆ ಮನದೊಡೆಯನೆ
Subscribe to:
Post Comments (Atom)

super rashmi, chennagide !!!
ReplyDeletehttp://kirana-maralihaadige.blogspot.com/
ReplyDeleteis my blogspot... please visit and tell Your opinions...
Thanks alot Kirana.........
ReplyDelete